5
ನೀತಿವಂತರಾದವರಿಗೆ ದೊರೆಯುವಂಥ ಫಲಗಳು
ಹೀಗಿರಲಾಗಿ ನಾವು * 5:1 ರೋಮಾ. 3:28ನಂಬಿಕೆಯಿಂದ ನೀತಿವಂತರಾದ ಕಾರಣ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ 5:1 ರೋಮಾ. 15:13ದೇವರೊಂದಿಗೆ ನಮಗೆ ಸಮಾಧಾನವುಂಟು. ಈಗ ನಾವು ನೆಲೆಗೊಂಡಿರುವ ದೇವರ ಕೃಪಾಶ್ರಯಕ್ಕೆ 5:2 ಎಫೆ 2:18, ಇಬ್ರಿ. 10:19-20ಆತನ ಮುಖಾಂತರವೇ ನಂಬಿಕೆಯಿಂದ ಸೇರಿದವರಾಗಿದ್ದೇವೆ ಮತ್ತು ದೇವರ ಮಹಿಮೆಯ ನಿರೀಕ್ಷೆಯಲ್ಲಿ ಉಲ್ಲಾಸಪಡುತ್ತೇವೆ. ಇದು ಮಾತ್ರವಲ್ಲದೆ ನಮಗೆ ಉಂಟಾಗುವ ಕಷ್ಟಸಂಕಟಗಳಲ್ಲಿಯೂ ಉಲ್ಲಾಸವಾಗಿದ್ದೇವೆ. ಏಕೆಂದರೆ § 5:4 ಲೂಕ 21:19, ಯಾಕೋಬ. 1:3ಕಷ್ಟಸಂಕಟಗಳು ತಾಳ್ಮೆಯನ್ನು, ತಾಳ್ಮೆಯೂ ಸದ್ಗುಣವನ್ನು, ಸದ್ಗುಣವು ನಿರೀಕ್ಷೆಯನ್ನು ಉಂಟುಮಾಡುತ್ತದೆಂದು ಬಲ್ಲೆವು. * 5:5 ಕೀರ್ತ 119:116, ಫಿಲಿ. 1:20ಈ ನಿರೀಕ್ಷೆಯು ನಮ್ಮನ್ನು ಆಶಾಭಂಗಪಡಿಸುವುದಿಲ್ಲ, 5:5 ಅ. ಕೃ. 2:17, 18:33, ತೀತ. 3:6ಏಕೆಂದರೆ, ನಮಗೆ ಕೊಟ್ಟಿರುವ ಪವಿತ್ರಾತ್ಮನ ಮೂಲಕವಾಗಿ ದೇವರ ಪ್ರೀತಿಯು ನಮ್ಮ ಹೃದಯಗಳಲ್ಲಿ ಸುರಿಸಿದ್ದಾನೆ.
ನಾವು 5:6 ರೋಮಾ. 5:8-10ಬಲಹೀನರಾಗಿದ್ದಾಗಲೇ ಕ್ರಿಸ್ತನು ನಿಯಮಿತ ಕಾಲದಲ್ಲಿ § 5:6 ರೋಮಾ. 4:25ಭಕ್ತಿಹೀನರಿಗೋಸ್ಕರ ಪ್ರಾಣಕೊಟ್ಟನು. ನೀತಿವಂತರಿಗೋಸ್ಕರ ಯಾರಾದರೂ ಪ್ರಾಣಕೊಡುವುದು ಅಪರೂಪ. ನಿಜವಾಗಿಯೂ ಒಳ್ಳೆಯವನಿಗಾಗಿ ಪ್ರಾಣಕೊಡುವುದಕ್ಕೆ ಯಾವನಾದರೂ ಧೈರ್ಯಮಾಡಿದರೂ ಮಾಡಬಹುದು. ಆದರೆ ನಾವು * 5:8 ರೋಮಾ. 5:6ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ 5:8 ಯೋಹಾ 3:16ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ದೃಢಪಡಿಸಿದ್ದಾನೆ. ಈಗ ನಾವು 5:9 ರೋಮಾ. 3:25ಆತನ ರಕ್ತದಿಂದ ನೀತಿವಂತರಾಗಿರಲಾಗಿ ಆತನ ಮೂಲಕವಾಗಿ ದೇವರ ಕೋಪದಿಂದ ಖಂಡಿತವಾಗಿಯೂ ರಕ್ಷಣೆಯಾಗುವುದು ಅಷ್ಟೇ ನಿಶ್ಚಯವಲ್ಲವೇ? 10 ನಾವು ದೇವರಿಗೆ § 5:10 ರೋಮಾ. 5:6-8ಶತ್ರುಗಳಾಗಿದ್ದಾಗಲೇ ನಮಗೆ ಆತನ ಮಗನ ಮರಣದ ಮೂಲಕ ಆತನೊಂದಿಗೆ * 5:10 2 ಕೊರಿ 5:18-20, ಎಫೆ 2:16, ಕೊಲೊ 1:20-22ಸಂಧಾನವಾಯಿತು ಆತನ ಕೂಡ ಸಂಧಾನವಾದ ನಮಗೆ ಮಗನ 5:10 2 ಕೊರಿ 4:10-11ಜೀವದಿಂದ ರಕ್ಷಣೆಯಾಗುವುದು ಅಷ್ಟೇ ನಿಶ್ಚಯವಲ್ಲವೇ? 11 ಇಷ್ಟು ಮಾತ್ರವಲ್ಲದೆ ನಾವು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ಸಂಧಾನವಾದದ್ದರಿಂದ ಆತನ ಮುಖಾಂತರ ದೇವರಲ್ಲಿ ಉಲ್ಲಾಸಪಡುತ್ತೇವೆ.
ಆದಾಮನಿಂದ ಎಲ್ಲರಿಗೂ ಮರಣವಾದಂತೆ ಕ್ರಿಸ್ತನನ್ನು ನಂಬಿದವರೆಲ್ಲರಿಗೂ ರಕ್ಷಣೆಯಾಗುವುದು
12 ಈ ವಿಷಯ ಹೇಗೆಂದರೆ 5:12 ಆದಿ 2:17, 3:6, 1 ಕೊರಿ 15:21-22ಒಬ್ಬ ಮನುಷ್ಯನಾದ ಆದಾಮನಿಂದಲೇ ಪಾಪವೂ ಲೋಕದೊಳಗೆ ಪ್ರವೇಶಿಸಿತು ಮತ್ತು ಮರಣವು ಪಾಪದ ನಿಮಿತ್ತ, ಹಾಗು, ಮರಣವು ಎಲ್ಲರು ಪಾಪಮಾಡಿದ್ದರಿಂದ ಎಲ್ಲರಿಗೂ ಪ್ರಾಪ್ತಿಯಾಯಿತು. 13 ಧರ್ಮಶಾಸ್ತ್ರವು ಕೊಡುವುದಕ್ಕೆ ಮುಂಚೆಯೇ ಪಾಪವು ಲೋಕದಲ್ಲಿತ್ತು. ಆದರೆ § 5:13 ರೋಮಾ. 3:20ಧರ್ಮಶಾಸ್ತ್ರವಿಲ್ಲದಿರುವಾಗ ಪಾಪವು ಗಣನೆಗೆ ಬರುವುದಿಲ್ಲ. 14 ಆದರೂ ಆದಾಮನ ಕಾಲದಿಂದ ಮೋಶೆಯ ಕಾಲದವರೆಗೂ ಮರಣದ ಆಳ್ವಿಕೆಯು ನಡೆಯುತ್ತಿತ್ತು. ಆದಾಮನು ದೇವರ ಆಜ್ಞೆಯನ್ನು ಮೀರಿ ಮಾಡಿದ ಪಾಪಕ್ಕೆ ಸಮಾನವಾದ ಪಾಪವನ್ನು ಮಾಡದೆ ಇದ್ದವರ ಮೇಲೆಯೂ ಅದು ನಡೆಯುತ್ತಿತ್ತು. * 5:14 1 ಕೊರಿ 15:45ಆ ಆದಾಮನು ಬರಬೇಕಾದ ಒಬ್ಬಾತನಾದ ಕ್ರಿಸ್ತನಿಗೆ ಪ್ರತಿರೂಪನಾಗಿದ್ದಾನೆ.
15 ಆದರೆ ಆ ಅಪರಾಧದ ಸಂಗತಿಗೂ ದೇವರ ಕೃಪಾದಾನದ ಸಂಗತಿಗೂ ಬಹಳ ವ್ಯತ್ಯಾಸವುಂಟು. ಹೇಗೆಂದರೆ ಆ ಒಬ್ಬನ ಅಪರಾಧದಿಂದ ಬಹುಮಂದಿ ಸತ್ತರು ಹೀಗಿರಲಾಗಿ ದೇವರ ಕೃಪೆಯು ಯೇಸು ಕ್ರಿಸ್ತನೆಂಬ ಈ ಒಬ್ಬ ಪುರುಷನ ಕೃಪೆಯಿಂದ ಸಿಕ್ಕುವ ವರವೂ 5:15 ರೋಮಾ. 5:19 ಯೆಶಾ 53:11ಅನೇಕರಿಗೆ ಹೇರಳವಾಗಿ ಸಿದ್ಧವಾಗಿರುವುದು ನಿಶ್ಚಯವಲ್ಲವೇ. 16 ದೇವರ ವರವು ಒಬ್ಬ ಮನುಷ್ಯನ ಪಾಪದ ಫಲದಂತಿರುವುದಿಲ್ಲ, ಒಬ್ಬ ಮನುಷ್ಯನ ಪಾಪದ ದೆಸೆಯಿಂದ ಅಪರಾಧಿಗಳಾಗಿದ್ದಾರೆಂದು ನಿರ್ಣಯಿಸಲ್ಪಟ್ಟಿತು. ಆದರೆ ದೇವರ ಕೃಪಾದಾನವು ಅನೇಕರ ಪಾಪಗಳನ್ನು ವಿಮೋಚಿಸಿ 5:16 ರೋಮಾ. 5:19ಅವರನ್ನು ನೀತಿವಂತರೆಂದು ನಿರ್ಣಯಿಸುವುದಕ್ಕೆ ಕಾರಣವಾಯಿತು. 17 ಒಬ್ಬನು ಮಾಡಿದ ಅಪರಾಧದಿಂದ ಮರಣವು ಉಂಟಾಗಿ ಆ ಒಬ್ಬನ ದೆಸೆಯಿಂದಲೇ ಮರಣವು ಆಳುವುದಾದರೆ ದೇವರು ಧಾರಾಳವಾಗಿ ಅನುಗ್ರಹಿಸುವ ಕೃಪಾದಾನವನ್ನೂ, ನೀತಿಯೆಂಬ ವರವನ್ನೂ ಹೊಂದಿದವರು ಯೇಸು ಕ್ರಿಸ್ತನೆಂಬ ಈ ಒಬ್ಬ ಪುರುಷನ ಮೂಲಕ § 5:17 ಪ್ರಕ 22:5 ಜೀವಭರಿತರಾಗಿ ಆಳುವುದು ಮತ್ತೂ ನಿಶ್ಚಯವಲ್ಲವೇ.
18 ಹೀಗಿರಲಾಗಿ ಆದಾಮನ ಒಂದೇ ಅಪರಾಧದ ಮೂಲಕ ಎಲ್ಲಾ ಮನುಷ್ಯರಿಗೆ ಮರಣವೆಂಬ ನಿರ್ಣಯವು ಹೇಗೆ ಉಂಟಾಯಿತೋ ಹಾಗೆಯೇ ಕ್ರಿಸ್ತನ ಒಂದೇ ಸತ್ಕಾರ್ಯದಿಂದ ಎಲ್ಲಾ ಮನುಷ್ಯರಿಗೆ ನೀತಿವಂತರೆಂಬ ನಿರ್ಣಯವು ಉಂಟಾಗಿ ಜೀವವು ಫಲಿಸಿತು. 19 ಒಬ್ಬನ ಅವಿಧೇಯತ್ವದಿಂದ ಎಲ್ಲರೂ ಹೇಗೆ ಪಾಪಿಗಳಾದರೋ ಹಾಗೆಯೇ ಒಬ್ಬನ * 5:19 ಇಬ್ರಿ. 5:8, ಫಿಲಿ. 2:8ವಿಧೇಯತ್ವದಿಂದ ಎಲ್ಲರೂ ನೀತಿವಂತರಾಗುವರು. 20  5:20 ಗಲಾ. 3:19, ರೋಮಾ. 3:20 ಅಪರಾಧಗಳು ಹೆಚ್ಚಾಗುತ್ತಾ ಬಂದೆಂತಲ್ಲಾ ಧರ್ಮಶಾಸ್ತ್ರವು ಅದರೊಂದಿಗೆ ಪ್ರವೇಶಿಸಿತು. ಆದರೆ ಪಾಪವು ಹೆಚ್ಚಾದಾಗಲ್ಲೇ 5:20 1 ತಿಮೊ. 1:14ಕೃಪೆಯು ಎಷ್ಟೋ ಹೆಚ್ಚಾಗಿ ಪ್ರಬಲವಾಯಿತು. 21 ಹೀಗೆ § 5:21 ರೋಮಾ. 5:12-14ಪಾಪವು ಮರಣವನ್ನುಂಟು ಮಾಡುತ್ತಾ ಅಧಿಕಾರವನ್ನು ನಡಿಸಿದ ಹಾಗೆಯೇ ದೇವರ ಕೃಪೆಯು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನೀತಿಯಿಂದ ನಿತ್ಯಜೀವವನ್ನುಂಟುಮಾಡುತ್ತಾ ಆಳುವಂತಾಯಿತು.

*5:1 5:1 ರೋಮಾ. 3:28

5:1 5:1 ರೋಮಾ. 15:13

5:2 5:2 ಎಫೆ 2:18, ಇಬ್ರಿ. 10:19-20

§5:4 5:4 ಲೂಕ 21:19, ಯಾಕೋಬ. 1:3

*5:5 5:5 ಕೀರ್ತ 119:116, ಫಿಲಿ. 1:20

5:5 5:5 ಅ. ಕೃ. 2:17, 18:33, ತೀತ. 3:6

5:6 5:6 ರೋಮಾ. 5:8-10

§5:6 5:6 ರೋಮಾ. 4:25

*5:8 5:8 ರೋಮಾ. 5:6

5:8 5:8 ಯೋಹಾ 3:16

5:9 5:9 ರೋಮಾ. 3:25

§5:10 5:10 ರೋಮಾ. 5:6-8

*5:10 5:10 2 ಕೊರಿ 5:18-20, ಎಫೆ 2:16, ಕೊಲೊ 1:20-22

5:10 5:10 2 ಕೊರಿ 4:10-11

5:12 5:12 ಆದಿ 2:17, 3:6, 1 ಕೊರಿ 15:21-22

§5:13 5:13 ರೋಮಾ. 3:20

*5:14 5:14 1 ಕೊರಿ 15:45

5:15 5:15 ರೋಮಾ. 5:19 ಯೆಶಾ 53:11

5:16 5:16 ರೋಮಾ. 5:19

§5:17 5:17 ಪ್ರಕ 22:5

*5:19 5:19 ಇಬ್ರಿ. 5:8, ಫಿಲಿ. 2:8

5:20 5:20 ಗಲಾ. 3:19, ರೋಮಾ. 3:20

5:20 5:20 1 ತಿಮೊ. 1:14

§5:21 5:21 ರೋಮಾ. 5:12-14