4
ಅಬ್ರಹಾಮನು ನಂಬಿಕೆಯಿಂದಲೇ ನೀತಿವಂತನಾದನೆಂಬ ವಾದ
ಹಾಗಾದರೆ ವಂಶಾನುಕ್ರಮವಾಗಿ ನಮಗೆ * 4:1 ಯೆಶಾ 51:2; ರೋಮಾ. 4:16ಮೂಲಪಿತೃವಾಗಿರುವ ಅಬ್ರಹಾಮನು ಈ ವಿಷಯದಲ್ಲಿ ಏನು ಪಡೆದುಕೊಂಡನೆಂದು ಹೇಳಬೇಕು? ಅಬ್ರಹಾಮನು ಪುಣ್ಯಕ್ರಿಯೆಯಿಂದಲೇ ನೀತಿವಂತನಾದ ಪಕ್ಷದಲ್ಲಿ ಹೊಗಳಿಕೊಳ್ಳುವುದಕ್ಕೆ ಅವನಿಗೆ ಆಸ್ಪದವಿರುವುದು; ಆದರೆ 4:2 1 ಕೊರಿ 1:31ದೇವರ ಮುಂದೆ ಹೊಗಳಿಕೊಳ್ಳುವುದಕ್ಕೆ ಆಸ್ಪದವಿರುವುದಿಲ್ಲ. ಇದರ ವಿಷಯದಲ್ಲಿ ಧರ್ಮಶಾಸ್ತ್ರವು ಹೇಳುವುದನ್ನು ಆಲೋಚಿಸಿರಿ, 4:3 ಆದಿ 15:6; ರೋಮಾ. 4:9, 22; ಗಲಾ. 3:6; ಯಾಕೋಬ 2:23“ಅಬ್ರಹಾಮನು ದೇವರನ್ನು ನಂಬಿದನು; ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿ ಎಂದು ಎಣಿಸಲ್ಪಟ್ಟಿತು” ಎಂದು ಹೇಳುತ್ತದೆ. ಕೆಲಸ ಮಾಡಿದವನಿಗೆ ಬರುವ ಕೂಲಿಯು ಕೃಪೆಯಿಂದ ದೊರಕುವಂಥದೆಂದು ಎಣಿಕೆಯಾಗುವುದಿಲ್ಲ; ಅದು ಅವನಿಗೆ ಸಲ್ಲತಕ್ಕದ್ದೇ ಎಂದು ಎಣಿಕೆಯಾಗುವುದು. ಆದರೆ ಯಾವನು ಪುಣ್ಯಕ್ರಿಯೆಗಳನ್ನು ಮಾಡಿದವನಾಗಿರದೆ § 4:5 ರೋಮಾ. 3:22ಪಾಪಾತ್ಮರನ್ನು ನೀತಿವಂತರೆಂದು ನಿರ್ಣಯಿಸುವಾತನಲ್ಲಿ ನಂಬಿಕೆಯಿಡುತ್ತಾನೋ ಅವನ ನಂಬಿಕೆಯೇ ನೀತಿ ಎಂದು ಎಣಿಸಲ್ಪಡುವುದು. ದೇವರು ಯಾವನನ್ನು ಪುಣ್ಯಕ್ರಿಯೆಗಳಿಲ್ಲದೆ ನೀತಿವಂತನೆಂದು ಎಣಿಸುತ್ತಾನೋ ಅವನು ಧನ್ಯನೆಂದು ದಾವೀದನು ಸಹ ಹೇಳುತ್ತಾನೆ. ಹೇಗೆಂದರೆ, * 4:7 ಕೀರ್ತ 32:1“ಯಾರ ಅಪರಾಧಗಳು ಪರಿಹಾರವಾಗಿದೆಯೋ, ಯಾರ ಪಾಪಗಳು ಕ್ಷಮಿಸಲ್ಪಟ್ಟಿವೆಯೋ ಅವರೇ ಧನ್ಯರು. 4:8 2 ಕೊರಿ 5:19ಕರ್ತನು ಯಾವನ ಪಾಪವನ್ನು ಲೆಕ್ಕಕ್ಕೆ ತರುವುದಿಲ್ಲವೋ ಆ ಮನುಷ್ಯನೇ ಧನ್ಯನು.” 4:9 ರೋಮಾ. 3:30ಈ ಶುಭವು ಸುನ್ನತಿಯಾದವರಿಗೆ ಮಾತ್ರವೋ? ಅಥವಾ ಸುನ್ನತಿಯಿಲ್ಲದವರಿಗೆ ಸಹ ಉಂಟೋ? § 4:9 ರೋಮಾ. 4:3“ಅಬ್ರಹಾಮನ ಲೆಕ್ಕಕ್ಕೆ ಅವನ ನಂಬಿಕೆಯೇ ನೀತಿಯೆಂದು ಎಣಿಸಲ್ಪಟ್ಟಿತು” ಎಂಬುದಾಗಿ ನಾವು ಹೇಳುತ್ತೇವೆ. 10 ಅದು ಯಾವಾಗ ಎಣಿಸಲ್ಪಟ್ಟಿತು? ಅವನಿಗೆ ಸುನ್ನತಿಯಾದ ಮೇಲೆಯೋ? ಸುನ್ನತಿಯಾಗುವುದಕ್ಕೆ ಮೊದಲೋ? ಸುನ್ನತಿಯಾದ ಮೇಲೆ ಅಲ್ಲ, ಸುನ್ನತಿಯಾಗುವುದಕ್ಕೆ ಮೊದಲೇ ಎಣಿಸಲ್ಪಟ್ಟಿತು. 11 ಅನಂತರ * 4:11 ಆದಿ 17:10,16ಸುನ್ನತಿಯನ್ನು, ಮೊದಲೇ ಅವನಿಗಿದ್ದ ನಂಬಿಕೆಯ ಗುರುತಾಗಿಯೂ, ಮುದ್ರೆಯಾಗಿಯೂ ಹೊಂದಿದನು. ಹೀಗಿರುವುದರಿಂದ ಅವನು ನಂಬುವವರೆಲ್ಲರಿಗೂ, ಅವರು ಸುನ್ನತಿಯಿಲ್ಲದವರಾಗಿದಾಗ್ಯೂ 4:11 ರೋಮಾ. 4:12,16ಮೂಲಪಿತೃವಾದನು; ಇದರಿಂದ ಅವರು ನೀತಿವಂತರೆಂದು ಎಣಿಸಲ್ಪಟ್ಟರು. 12 ಇದಲ್ಲದೆ ಸುನ್ನತಿಯವರಲ್ಲಿ ಸುನ್ನತಿಹೊಂದಿದ್ದವರಿಗೆ ಮಾತ್ರವಲ್ಲದೆ, ನಮ್ಮ ಪಿತೃವಾಗಿರುವ ಅಬ್ರಹಾಮನಿಗೆ ಸುನ್ನತಿಯಾಗುವುದಕ್ಕೂ ಮೊದಲೇ ಇದ್ದ ನಂಬಿಕೆಯ ಕ್ರಮವನ್ನು ಅನುಸರಿಸಿ ನಡೆಯುತ್ತಾರೋ ಅವರಿಗೆ ಸಹ ಮೂಲ ತಂದೆಯಾಗಿದ್ದಾನೆ.
ನಂಬಿಕೆಯಿಂದ ವಾಗ್ದಾನವನ್ನು ಹೊಂದಿದ್ದು
13  4:13 ಆದಿ 17:4-6; 22:17,18ನೀನು ಲೋಕಕ್ಕೆ ಬಾಧ್ಯನಾಗುವಿ ಎಂಬ ವಾಗ್ದಾನವು ಅಬ್ರಹಾಮನಿಗಾಗಲಿ ಅವನ ಸಂತತಿಯವರಿಗಾಗಲಿ ಧರ್ಮಶಾಸ್ತ್ರದಿಂದ ಆದದ್ದಲ್ಲ; ನಂಬಿಕೆಯಿಂದ ಬರುವ ನೀತಿಯಾಗಿದೆ. 14 ಧರ್ಮಶಾಸ್ತ್ರವನ್ನು ಅನುಸರಿಸುವವರು ಲೋಕಕ್ಕೆ ಬಾಧ್ಯರಾಗಿದ್ದರೆ ನಂಬಿಕೆಯು ವ್ಯರ್ಥವಾಯಿತು, ವಾಗ್ದಾನವು ನಿರರ್ಥಕವಾಯಿತು. 15 ಯಾಕೆಂದರೆ § 4:15 ರೋಮಾ. 7:7; 10:25; 2 ಕೊರಿ 7:9; ಗಲಾ. 3:10ಧರ್ಮಶಾಸ್ತ್ರವು ಜನರನ್ನು ದೇವರ ಕೋಪಕ್ಕೆ ಗುರಿಮಾಡುವಂಥದ್ದು, ಆದರೆ * 4:15 ರೋಮಾ. 3:20; ಗಲಾ. 3:19ಧರ್ಮಶಾಸ್ತ್ರವಿಲ್ಲದ ಪಕ್ಷದಲ್ಲಿ ಅದರ ಉಲ್ಲಂಘನೆಯೂ ಇಲ್ಲ. 16 ಆದಕಾರಣ ಆ ಬಾಧ್ಯತೆಯು ಕೃಪೆಯಿಂದಲೇ ದೊರೆಯುವಂಥದ್ದಾಗಿದೆ, ಅದು ನಂಬಿಕೆಯ ಮೂಲಕವೇ ಸಿಕ್ಕುತ್ತದೆ, ಹೀಗೆ ಆ ವಾಗ್ದಾನವು ನಮ್ಮೆಲ್ಲರ ತಂದೆಯಾದ 4:16 ಗಲಾ. 3:22ಅಬ್ರಹಾಮನ ಸಂತತಿಯವರೆಲ್ಲರಿಗೂ, ಅಂದರೆ ಧರ್ಮಶಾಸ್ತ್ರವನ್ನು ಆಧಾರ ಮಾಡಿಕೊಂಡವರಿಗೆ ಮಾತ್ರವಲ್ಲದೆ, ಅಬ್ರಹಾಮನಂಥ ನಂಬಿಕೆ ಇರುವವರೆಲ್ಲರಿಗೂ ಸಹ ಸ್ಥಿರವಾಗಿದೆ. 17  4:17 ಆದಿ 17:5“ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ಪಿತನಾಗಿ ನೇಮಿಸಿದ್ದೇನೆಂದು” ಶಾಸ್ತ್ರದಲ್ಲಿ ಬರೆದಿದೆಯಲ್ಲ. ದೇವರು ಸತ್ತವರನ್ನು ಬದುಕಿಸುವವನಾಗಿಯೂ ಮತ್ತು § 4:17 1 ಕೊರಿ 1:28ಅಸ್ತಿತ್ವದಲ್ಲಿ ಇಲ್ಲದ್ದನ್ನು ಅಸ್ತಿತ್ವಕ್ಕೆ ತರುವಂಥವನೂ ಆದ ದೇವರಲ್ಲಿ ಅಬ್ರಹಾಮನು ನಂಬಿಕೆಯಿಟ್ಟನು. 18  * 4:18 ಆದಿ 15:5“ನಿನ್ನ ಸಂತಾನವು ನಕ್ಷತ್ರಗಳಷ್ಟಾಗುವುದು” ಎಂಬುದಾಗಿ ತನಗೆ ಹೇಳಲ್ಪಟ್ಟ ಆ ನಿರೀಕ್ಷೆಗೆ ಆಸ್ಪದವಿಲ್ಲದಿರುವಾಗಲೂ ಅಬ್ರಹಾಮನು ತಾನು ಬಹು ಜನಾಂಗಗಳಿಗೆ ಪಿತನಾಗುವೆನೆಂದು ನಿರೀಕ್ಷೆಗೆ ವಿರುದ್ಧವಾಗಿ ನಿರೀಕ್ಷಿಸಿ ನಂಬಿದನು. 19  4:19 ಆದಿ 17:17ಅವನು ಹೆಚ್ಚು ಕಡಿಮೆ ನೂರು ವರ್ಷದವನಾಗಿದ್ದು 4:19 ಇಬ್ರಿ. 11:12ತನ್ನ ದೇಹವು ಆಗಲೇ ಮೃತಪ್ರಾಯವಾಯಿತೆಂದೂ § 4:19 ಆದಿ 18:11ಸಾರಳಿಗೆ ಗರ್ಭಕಾಲ ಕಳೆದು ಹೋಯಿತೆಂದು ಪರಿಗಣಿಸಿದ್ದಾಗ್ಯೂ ಅವನ ನಂಬಿಕೆಯು ಕುಂದಲಿಲ್ಲ. 20 ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಅವನು ಅಪನಂಬಿಕೆಯಿಂದ ಚಂಚಲಚಿತ್ತನಾಗಲಿಲ್ಲ. 21 ದೇವರನ್ನು ಘನಪಡಿಸುವವನಾಗಿ * 4:21 ಆದಿ 18:14ಆತನು ತನ್ನ ವಾಗ್ದಾನವನ್ನು ನೆರವೇರಿಸುವುದಕ್ಕೆ ಸಮರ್ಥನೆಂದು 4:21 ನಂಬಿಕೆಯಿಂದಲೇ ಬಲಹೊಂದಿಪೂರ್ಣದೃಢತೆಯುಳ್ಳವನಾದನು. 22 ಆದ್ದರಿಂದ ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು. 23 ಆದರೆ ಅದು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತೆಂಬುದು ಅವನಿಗೋಸ್ಕರ ಮಾತ್ರವಲ್ಲದೆ 4:23 ರೋಮಾ. 15:4; 1 ಕೊರಿ 9:9,10; 6:11; 2 ತಿಮೊ. 3:16,17ನಮಗೋಸ್ಕರವೂ ಬರೆದಿರುವುದು. 24 ನಮ್ಮ ಕರ್ತನಾದ ಯೇಸುವನ್ನು ಸತ್ತವರೊಳಗಿಂದ § 4:24 ಅ. ಕೃ. 2:24ಎಬ್ಬಿಸಿದ ದೇವರನ್ನು * 4:24 ರೋಮಾ. 10:9; 1 ಪೇತ್ರ 1:21ನಂಬುವ ನಮಗೂ ಆ ನಂಬಿಕೆಯು ನೀತಿಯೆಂದು ಎಣಿಸಲ್ಪಡುವುದು. 25  4:25 ರೋಮಾ. 5:6,8; 8:32; ಯೆಶಾ 53:5,6; ಮತ್ತಾ 20:28; ಗಲಾ. 1:4ದೇವರು ಯೇಸುವನ್ನು ನಮ್ಮ ಅಪರಾಧಗಳ ನಿಮಿತ್ತ ಮರಣಕ್ಕೆ ಒಪ್ಪಿಸಿಕೊಟ್ಟು 4:25 ರೋಮಾ. 5:18ನಮಗೆ ನೀತಿವಂತರೆಂಬ ನಿರ್ಣಯವು ಉಂಟಾಗುವುದಕ್ಕಾಗಿಯೇ ಜೀವದಿಂದ ಎಬ್ಬಿಸಲ್ಪಟ್ಟನು.

*4:1 4:1 ಯೆಶಾ 51:2; ರೋಮಾ. 4:16

4:2 4:2 1 ಕೊರಿ 1:31

4:3 4:3 ಆದಿ 15:6; ರೋಮಾ. 4:9, 22; ಗಲಾ. 3:6; ಯಾಕೋಬ 2:23

§4:5 4:5 ರೋಮಾ. 3:22

*4:7 4:7 ಕೀರ್ತ 32:1

4:8 4:8 2 ಕೊರಿ 5:19

4:9 4:9 ರೋಮಾ. 3:30

§4:9 4:9 ರೋಮಾ. 4:3

*4:11 4:11 ಆದಿ 17:10,16

4:11 4:11 ರೋಮಾ. 4:12,16

4:13 4:13 ಆದಿ 17:4-6; 22:17,18

§4:15 4:15 ರೋಮಾ. 7:7; 10:25; 2 ಕೊರಿ 7:9; ಗಲಾ. 3:10

*4:15 4:15 ರೋಮಾ. 3:20; ಗಲಾ. 3:19

4:16 4:16 ಗಲಾ. 3:22

4:17 4:17 ಆದಿ 17:5

§4:17 4:17 1 ಕೊರಿ 1:28

*4:18 4:18 ಆದಿ 15:5

4:19 4:19 ಆದಿ 17:17

4:19 4:19 ಇಬ್ರಿ. 11:12

§4:19 4:19 ಆದಿ 18:11

*4:21 4:21 ಆದಿ 18:14

4:21 4:21 ನಂಬಿಕೆಯಿಂದಲೇ ಬಲಹೊಂದಿ

4:23 4:23 ರೋಮಾ. 15:4; 1 ಕೊರಿ 9:9,10; 6:11; 2 ತಿಮೊ. 3:16,17

§4:24 4:24 ಅ. ಕೃ. 2:24

*4:24 4:24 ರೋಮಾ. 10:9; 1 ಪೇತ್ರ 1:21

4:25 4:25 ರೋಮಾ. 5:6,8; 8:32; ಯೆಶಾ 53:5,6; ಮತ್ತಾ 20:28; ಗಲಾ. 1:4

4:25 4:25 ರೋಮಾ. 5:18