೬
೧-೨ ಆದುದರಿಂದ ಕ್ರಿಸ್ತನ ವಿಷಯವಾದ ಪ್ರಾಥಮಿಕ ಉಪದೇಶವನ್ನು ಬಿಟ್ಟು, * ಇಬ್ರಿ. 9:14:ನಿರ್ಜೀವ ಕ್ರಿಯೆಗಳಿಂದ ಮಾನಸಾಂತರವೂ, ದೇವರಲ್ಲಿ ನಂಬಿಕೆಯೂ, † ಅ. ಕೃ. 19:4,5.ದೀಕ್ಷಾಸ್ನಾನಗಳ ಬೋಧನೆಯೂ, ‡ ಅ. ಕೃ. 8:17; 19:6:ಹಸ್ತಾರ್ಪಣೆಯೂ, § ಅ. ಕೃ. 17:31, 32:ಸತ್ತವರಿಗೆ ಪುನರುತ್ಥಾನವೂ ಮತ್ತು * ಅ. ಕೃ. 10:42; 17:31; 2 ಕೊರಿ. 5:10:ನಿತ್ಯವಾದ ನ್ಯಾಯತೀರ್ಪೂ ಉಂಟೆಂಬುದರ ಕುರಿತು ಪದೇಪದೇ ಅಸ್ತಿವಾರವನ್ನೆ ಹಾಕುತಿರದೆ ನಾವು ಪರಿಪಕ್ವತೆಯೆಡೆಗೆ † ಇಬ್ರಿ. 5:12; ಫಿಲಿ. 3:12-14:ಸಾಗೋಣ. ೩ ದೇವರು ಅನುಮತಿಸುವುದಾದರೆ ನಾವು ಇವುಗಳನ್ನು ಮಾಡುವೆವು. ೪ ಒಂದು ಸಾರಿ ‡ ಇಬ್ರಿ. 10:32:ಬೆಳಕಿನಲ್ಲಿ ಸೇರಿದವರು ಸ್ವರ್ಗೀಯ § ಯೋಹಾ 4:10; ಎಫೆ. 2:8:ದಾನವನ್ನು ಅನುಭವಿಸಿದವರು, * ಗಲಾ. 3:2, 5:ಪವಿತ್ರಾತ್ಮನಲ್ಲಿ ಪಾಲುಗಾರರಾದವರು, ೫ ದೇವರ ವಾಕ್ಯದ ಶ್ರೇಷ್ಟತೆಯನ್ನೂ ಮುಂದಣ ಯುಗದ ಶಕ್ತಿಯನ್ನೂ ಅನುಭವಿಸಿದವರು ಅದರಿಂದ ಹಿಂಜಾರಿಹೋದರೆ, ೬ † 1 ಯೋಹಾ. 5:16:ಅವರಲ್ಲಿ ತಿರುಗಿ ಮಾನಸಾಂತರವನ್ನು ಹುಟ್ಟಿಸುವುದು ಅಸಾಧ್ಯ, ಯಾಕೆಂದರೆ ‡ ಇಬ್ರಿ. 10:29:ಅವರು ತಾವಾಗಿಯೇ ದೇವರ ಮಗನನ್ನು ಪುನಃ ಶಿಲುಬೆಗೆ ಹಾಕುವವರೂ ಆತನನ್ನು ಬಹಿರಂಗವಾಗಿ ಅವಮಾನಪಡಿಸುವವರೂ ಆಗಿರುತ್ತಾರೆ. ೭ ಭೂಮಿಯು ತನ್ನ ಮೇಲೆ ಅನೇಕಾವರ್ತಿ ಸುರಿಯುವ ಮಳೆಯನ್ನು ಹೀರಿಕೊಂಡು, ಅದು ಯಾರ ನಿಮಿತ್ತವಾಗಿ ವ್ಯವಸಾಯ ಮಾಡಲ್ಪಡುತ್ತದೋ, ಅವರಿಗೆ ಅನುಕೂಲವಾದ ಬೆಳೆಯನ್ನು ಕೊಡುತ್ತದೆ, ಅದು ದೇವರ ಆಶೀರ್ವಾದವನ್ನು ಹೊಂದುತ್ತದೆ. ೮ § ಯೆಶಾ. 5:1-7; ಲೂಕ. 13:6-9:ಆದರೆ ಅದು ಮುಳ್ಳುಗಿಡಗಳನ್ನೂ ಕಳೆಗಳನ್ನೂ ಬೆಳೆಸಿದರೆ, ಅಯೋಗ್ಯವಾದದ್ದಾಗಿ ಶಾಪಕ್ಕೆ ಗುರಿಯಾಗುತ್ತದೆ. * ಮಲಾ. 4:1; ಯೋಹಾ. 15:6:ಕೊನೆಗದು ಸುಡಲ್ಪಡುತ್ತದೆ. ೯ ಪ್ರಿಯರೇ, ಈ ರೀತಿಯಾಗಿ ನಾವು ಮಾತನಾಡಿದರೂ ನಿಮ್ಮ ವಿಷಯವಾಗಿಯೂ ರಕ್ಷಣೆಗೆ ಸಂಬಂಧಿಸಿದವುಗಳಲ್ಲಿಯೂ ನೀವು ಉತ್ತಮವಾಗಿದ್ದೀರೆಂದು ನಂಬಿದ್ದೇವೆ. ೧೦ † ರೋಮಾ. 15:31; 2 ಕೊರಿ. 8:4; 9:1, 12; 2 ತಿಮೊ. 1:18; ಪ್ರಕ. 2:19:ನೀವು ದೇವಜನರಿಗೆ ಉಪಚಾರ ಮಾಡಿದ್ದೀರಿ, ಇನ್ನೂ ಮಾಡುತ್ತಾ ಇದ್ದಿರಿ. ಈ ಕೆಲಸವನ್ನು ಮತ್ತು ಇದರಲ್ಲಿ ನೀವು ಆತನ ನಾಮದ ಕಡೆಗೆ ತೋರಿಸಿದ ಪ್ರೀತಿಯನ್ನು ‡ ಜ್ಞಾ. 19:17; ಮತ್ತಾ 10:42; 25:40; ಮಾರ್ಕ 9:41:ಆತನು ಮರೆಯುವುದಿಲ್ಲ, ಯಾಕೆಂದರೆ ದೇವರು ಅನೀತಿಯುಳ್ಳವನಲ್ಲ. ೧೧ ನಿರೀಕ್ಷೆಯ ಸಂಪೂರ್ಣ ನಿಶ್ಚಯತ್ವವನ್ನು ಹೊಂದುವುದಕ್ಕಾಗಿ ಅಂತ್ಯದವರೆಗೂ ನೀವು ಅದೇ § ರೋಮಾ. 5:2-5:ಶ್ರದ್ಧೆಯನ್ನು ತೋರಿಸಬೇಕೆಂದು ನಾನು ಬಹಳವಾಗಿ ಅಪೇಕ್ಷಿಸುತ್ತೇವೆ. ೧೨ ನೀವು ಸೋಮಾರಿಗಳಾಗಿರಬೇಕೆಂದು ಅಪೇಕ್ಷಿಸುವುದಿಲ್ಲ, ಬದಲಿಗೆ ನಂಬಿಕೆಯಿಂದಲೂ, ತಾಳ್ಮೆಯಿಂದಲೂ, ವಾಗ್ದಾನಗಳನ್ನು ಬಾಧ್ಯವಾಗಿ * ಇಬ್ರಿ. 13:7; ಇಬ್ರಿ. 10:36; 13:7:ಹೊಂದುವವರನ್ನು ಅನುಸರಿಸುವವರಾಗಬೇಕೆಂದು ಕೋರುತ್ತೇನೆ.
ದೇವರ ವಾಗ್ದಾನಗಳು ಎಷ್ಟು ಮಾತ್ರಕ್ಕೂ ತಪ್ಪುವುದಿಲ್ಲ
೧೩ ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದಾಗ ತನಗಿಂತಲೂ ಹೆಚ್ಚಿನವರು ಯಾರೂ ಇಲ್ಲದ್ದರಿಂದ † ಆದಿ. 22:16, 17:ತನ್ನ ಮೇಲೆ ಆಣೆಯಿಟ್ಟು, ೧೪ ಖಂಡಿತವಾಗಿಯೂ ನಾನು ನಿನ್ನನ್ನು ಆಶೀರ್ವದಿಸುವೆನು. ನಿನ್ನ ಸಂತಾನವನ್ನು ಅಭಿವೃದ್ಧಿಪಡಿಸುವೆನು ಎಂದು ಹೇಳಿದನಷ್ಟೆ. ೧೫ ಹೀಗೆ ‡ ರೋಮಾ. 4:13:ಅಬ್ರಹಾಮನು ತಾಳ್ಮೆಯಿಂದ ಕಾದುಕೊಂಡಿದ್ದು ವಾಗ್ದಾನವನ್ನು ಪಡೆದುಕೊಂಡನು. ೧೬ ಮನುಷ್ಯರು ತಮಗಿಂತಲೂ ಹೆಚ್ಚಿನವನ ಮೇಲೆ ಆಣೆಯಿಡುತ್ತಾರಷ್ಟೆ, § ವಿಮೋ. 22:11:ಆಣೆಯನ್ನು ದೃಢಪಡಿಸಿದ ಮೇಲೆ ವಿವಾದವು ಅಂತ್ಯವಾಗುವುದು. ೧೭ ಹಾಗೆಯೇ ದೇವರು * ವ. 18; ಕೀರ್ತ. 110:4; ಜ್ಞಾ. 19:21:ತನ್ನ ಸಂಕಲ್ಪವು ಬದಲಾಗಲಾರದ್ದೆಂಬುದನ್ನು, † ಇಬ್ರಿ. 11:9:ವಾಗ್ದಾನದ ಬಾಧ್ಯಸ್ಥರಿಗೆ ಬಹು ಸ್ಪಷ್ಟವಾಗಿ ತೋರಿಸಬೇಕೆಂದು ಆಣೆಯಿಟ್ಟು ಸ್ಥಿರಪಡಿಸಿದನು. ೧೮ ದೇವರ ವಾಗ್ದಾನ ಮತ್ತು ಆಣೆ ಇವೆರಡೂ ನಿಶ್ಚಲವಾದ ಆಧಾರಗಳು ಏಕೆಂದರೆ ದೇವರು ಸುಳ್ಳಾಡುವವನಲ್ಲ. ಅದುದರಿಂದ ಆಶ್ರಯವನ್ನು ಹೊಂದಬೇಕೆಂದು ಓಡಿಬಂದು, ‡ ಇಬ್ರಿ. 12:1,2.ನಮ್ಮ ಮುಂದೆ ಇಟ್ಟಿರುವ ನಿರೀಕ್ಷೆಯನ್ನು ಹಿಡಿದುಕೊಂಡವರಾದ ನಮಗೆ ಬಲವಾದ ಪ್ರೋತ್ಸಾಹ ಉಂಟಾಯಿತು. ೧೯ § ತೀತ. 1:2:ಆ ನಿರೀಕ್ಷೆಯು ನಮ್ಮ ಪ್ರಾಣಕ್ಕೆ ವಿಶ್ವಾಸಾರ್ಹವಾದದ್ದೂ ಸ್ಥಿರವಾದದ್ದೂ ಆದ * ಅಂದರೆ ಆಧಾರವಾಗಿರುವುದು. ಲಂಗರವಾಗಿದೆ. ಅದು ಅತಿ ಪರಿಶುದ್ಧ ಸ್ಥಳದ † ಇಬ್ರಿ. 9:7; ಯಾಜ. 16:15:ತೆರೆಯ ಒಳಗಡೆ ಪ್ರವೇಶಿಸುವಂಥದ್ದಾಗಿದೆ. ೨೦ ಅಲ್ಲಿಗೆ ‡ ಇಬ್ರಿ. 3:1; 5:6, 10; 7:17, 21ಯೇಸು ಸದಾಕಾಲವೂ ಮೆಲ್ಕಿಜೆದೇಕನ ತರಹದ ಮಹಾಯಾಜಕನಾಗಿ, § ಇಬ್ರಿ. 4:14; 8:1; 9:24:ನಮಗೋಸ್ಕರ ಮುಂಚಿತವಾಗಿಯೇ ಹೋಗಿ ಆ ಸಾನಿಧ್ಯವನ್ನು ಪ್ರವೇಶಿಸಿದ್ದಾನೆ.
*೬:೧-೨ ಇಬ್ರಿ. 9:14:
‡೬:೧-೨ ಅ. ಕೃ. 8:17; 19:6:
§೬:೧-೨ ಅ. ಕೃ. 17:31, 32:
*೬:೧-೨ ಅ. ಕೃ. 10:42; 17:31; 2 ಕೊರಿ. 5:10:
†೬:೧-೨ ಇಬ್ರಿ. 5:12; ಫಿಲಿ. 3:12-14:
‡೬:೪ ಇಬ್ರಿ. 10:32:
*೬:೪ ಗಲಾ. 3:2, 5:
†೬:೬ 1 ಯೋಹಾ. 5:16:
‡೬:೬ ಇಬ್ರಿ. 10:29:
§೬:೮ ಯೆಶಾ. 5:1-7; ಲೂಕ. 13:6-9:
*೬:೮ ಮಲಾ. 4:1; ಯೋಹಾ. 15:6:
†೬:೧೦ ರೋಮಾ. 15:31; 2 ಕೊರಿ. 8:4; 9:1, 12; 2 ತಿಮೊ. 1:18; ಪ್ರಕ. 2:19:
‡೬:೧೦ ಜ್ಞಾ. 19:17; ಮತ್ತಾ 10:42; 25:40; ಮಾರ್ಕ 9:41:
§೬:೧೧ ರೋಮಾ. 5:2-5:
*೬:೧೨ ಇಬ್ರಿ. 13:7; ಇಬ್ರಿ. 10:36; 13:7:
†೬:೧೩ ಆದಿ. 22:16, 17:
‡೬:೧೫ ರೋಮಾ. 4:13:
*೬:೧೭ ವ. 18; ಕೀರ್ತ. 110:4; ಜ್ಞಾ. 19:21:
†೬:೧೭ ಇಬ್ರಿ. 11:9:
‡೬:೧೮ ಇಬ್ರಿ. 12:1,2.
§೬:೧೯ ತೀತ. 1:2:
*೬:೧೯ ಅಂದರೆ ಆಧಾರವಾಗಿರುವುದು.
†೬:೧೯ ಇಬ್ರಿ. 9:7; ಯಾಜ. 16:15:
‡೬:೨೦ ಇಬ್ರಿ. 3:1; 5:6, 10; 7:17, 21
§೬:೨೦ ಇಬ್ರಿ. 4:14; 8:1; 9:24: