* 112 ಈ ಕೀರ್ತನೆ, ಹೀಬ್ರೂ ಅಕ್ಷರ ಕ್ರಮಾನುಸಾರವಾದ ಪ್ರಾರ್ಥನೆ.
ಕೀರ್ತನೆ 112
ಯೆಹೋವ ದೇವರನ್ನು ಸ್ತುತಿಸಿರಿ.
 
ಯೆಹೋವ ದೇವರಿಗೆ ಭಯಪಟ್ಟು ಅವರ ಆಜ್ಞೆಗಳಲ್ಲಿ ಬಹಳವಾಗಿ
ಸಂತೋಷಿಸುವವರು ಧನ್ಯರು.
 
ಅವರ ಸಂತತಿಯು ಭೂಮಿಯಲ್ಲಿ ಪರಾಕ್ರಮಶಾಲಿಯಾಗಿರುವುದು;
ಯಥಾರ್ಥರ ಸಂತತಿಯು ಆಶೀರ್ವಾದ ಹೊಂದುವುದು.
ಧನವೂ, ಐಶ್ವರ್ಯವೂ ಅವರ ಮನೆಯಲ್ಲಿ ಇರುವುದು;
ಅವರ ನೀತಿಯು ಶಾಶ್ವತವಾಗಿ ಉಳಿಯುವುದು.
ಯಥಾರ್ಥರಿಗೆ ಕತ್ತಲಲ್ಲಿ ಬೆಳಕು ಮೂಡುವುದು;
ಅವರು ಕೃಪೆಯೂ, ಅನುಕಂಪವೂ, ನೀತಿಯೂ ಉಳ್ಳವವರಾಗಿರುವರು.
ದಯೆತೋರಿಸಿ ಸಾಲಕೊಡುವವರಿಗೆ, ಒಳ್ಳೆಯದಾಗುವುದು;
ಅವರು ತಮ್ಮ ಕಾರ್ಯಗಳನ್ನು ನ್ಯಾಯದಿಂದ ನಡೆಸುವರು.
 
ನಿಶ್ಚಯವಾಗಿ ನೀತಿವಂತರು ಎಂದೆಂದಿಗೂ ಕದಲರು;
ನೀತಿವಂತರು ನಿತ್ಯವಾಗಿ ಜ್ಞಾಪಕದಲ್ಲಿ ಇರುವರು.
ಅವರಿಗೆ ಅಶುಭದ ಸುದ್ದಿಯ ಭಯ ಇರುವುದಿಲ್ಲ;
ಅವರ ಹೃದಯವು ಯೆಹೋವ ದೇವರಲ್ಲಿ ಭರವಸವಿಟ್ಟು ಸ್ಥಿರವಾಗಿರುವುದು.
ಅವರ ಹೃದಯವು ಸುರಕ್ಷಿತವಾಗಿರುವುದು.
ಅವರು ತಮ್ಮ ವೈರಿಗಳಿಗಾಗುವ ಶಿಕ್ಷೆಯನ್ನು ನೋಡುವರು, ಭಯಪಡರು.
ಅವರು ಬಡವರಿಗೆ ದಾನಗಳನ್ನು ಧಾರಾಳವಾಗಿ ಹಂಚಿಡುವರು;
ಅವರ ನೀತಿಯು ಸದಾಕಾಲವೂ ನೆಲೆಯಾಗಿ ಇರುವುದು;
ಅವನ ಬಲವು ಘನದಿಂದ ಉನ್ನತವಾಗುವುದು.
 
10 ದುಷ್ಟರು ಇದನ್ನು ಕಂಡು ವ್ಯಥೆ ಪಡುವರು;
ಅವರು ತಮ್ಮ ಹಲ್ಲು ಕಡಿದು ಮರೆಯಾಗಿ ಹೋಗುವರು;
ದುಷ್ಟರ ಆಶೆಯು ನಾಶವಾಗುವುದು.

*^ 112 ಈ ಕೀರ್ತನೆ, ಹೀಬ್ರೂ ಅಕ್ಷರ ಕ್ರಮಾನುಸಾರವಾದ ಪ್ರಾರ್ಥನೆ.